ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹಳೆಯ ಪ್ರಶ್ನೆ ಪತ್ರಿಕೆ ಟೆಸ್ಟ್ -2 (100 ಪ್ರಶ್ನೆ ಮತ್ತು ಉತ್ತರಗಳು) Dr. Sachin TP Updated on: June 30, 2026 Civil Police Constable Question paper Test -2 1 / 100 1) ಬೋರ್ಡೆಕ್ಸ್ ಮಿಶ್ರಣ, ಕರಾವಳಿ ಕರ್ನಾಟಕದಲ್ಲಿ ಸಾಮಾನ್ಯವಾಗಿ ಬಳಸುವ ಶಿಲೀಂದ್ರನಾಶಕವು...................ನ ಸಂಯೋಜನೆಯಾಗಿದೆ. a) ಸೋಡಿಯಂ ಕ್ಲೋರೈಡ್, ಸುಣ್ಣ ಮತ್ತು ನೀರು b) ಅಮೋನಿಯಂ ನೈಟ್ರೇಟ್ ಮತ್ತು ನೀರು c) ಕಾಪರ್ ಸಲ್ಫೆಟ್ , ಸುಣ್ಣ ಮತ್ತು ನೀರು d) ಇವುಗಳಲ್ಲಿ ಯಾವುದೂ ಅಲ್ಲ 2 / 100 2) ಅತ್ಯಂತ ಹಳೆಯ ಕನ್ನಡ ಭಾಷೆಯ ಶಾಸನ ಎಂದು ಪರಿಚಿತ 'ಹಲ್ಟಿಡಿ ಶಾಸನ'ವನ್ನು........................ನಲ್ಲಿ ಕಂಡು ಹಿಡಿಯಲಾಯಿತು. a) ಹಾಸನ b) ಬಾಗಲಕೋಟೆ c) ಉಡುಪಿ d) ಮೈಸೂರು 3 / 100 3) ಕೆಳಗಿನ ಘಟನೆಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿ. (ಹಳೆಯದು ಮೊದಲು) (i) ಭಾರತ ಬಿಟ್ಟು ತೊಲಗಿ ಚಳು (ಕ್ವಿಟ್ ಇಂಡಿಯ ಮೂವ್ಮೆಂಟ್) (ii) ದಾಂಡಿ ಮೆರವಣಿಗೆ (ದಂಡಿ ಮಾರ್ಚ್) (iii) ಖಿಲಾಫತ್ ಚಳುವಳಿ (ಖಿಲಾಫತ್ ಮೂವ್ಮೆಂಟ್) (iv) ಸ್ವದೇಶಿ ಚಳುವಳಿ (ಸ್ವದೇಶಿ ಮೂವ್ಮೆಂಟ್) a) (i), (ii), (iii), (iv) b) (ii), (iii), (iv), (i) c) (iii), (ii), (i), (iv) d) (iv), (iii), (ii), (i) 4 / 100 4) ......... ನಲ್ಲಿರುವ ಹಳ್ಳಿಯಿಂದ ಕಿನ್ನಾಳ ಕಲೆ ಎಂದು ಹೆಸರಿಸಲಾಗಿದೆ. a) ಬೀದರ್ b) ತುಮಕೂರು c) ಕೊಪ್ಪಳ d) ಬೆಳಗಾವಿ 5 / 100 5) ಇವರುಗಳಲ್ಲಿ ಮರಳಿ ಮಣ್ಣಿಗೆ ಪುಸ್ತಕವನ್ನು ಬರೆದವರು a) ದ.ರಾ. ಬೇಂದ್ರೆ b) ಕುವೆಂಪು c) ಕೋಟ ಶಿವರಾಮ ಕಾರಂತ d) ಗೋಪಾಲಕೃಷ್ಣ ಅಡಿಗ 6 / 100 6) ಶರಾವತಿ ನದಿ....................ಮೂಲಕ ಹರಿಯುತ್ತದೆ. a) ಕುಮಟ b) ಕುಂದಾಪುರ c) ಪುತ್ತೂರು d) ಹೊನ್ನಾವರ 7 / 100 7) ಕೊಂಕಣ ರೈಲ್ವೆ ನೆಟ್ವರ್ಕ್(ಜಾಲವು) ಯಾವುದರ ಮೂಲಕ ಹಾದು ಹೋಗುತ್ತದೆ ? a) ಹುಬ್ಬಳ್ಳಿ b) ಕಾರವಾರ c) ಹೊಸಪೇಟೆ d) ಬೇಲೂರು 8 / 100 8) 'ಅಪ್ಪೆಮಿಡಿ' ಎಂಬುದು ಯಾವುದರ ಸ್ಥಳೀಯ ವಿಧವಾಗಿದೆ ? a) ಸೀಬೆಹಣ್ಣು b) ಸಪೋಟಾ c) ಮಾವು d) ಸೌತೆಕಾಯಿ 9 / 100 9) ಈ ಕೆಳಗಿನ ಯಾವ ನಗರವು ರೇಖಾಂಶದ ದೃಷ್ಟಿಯಿಂದ ಹೆಚ್ಚು ದೂರದಲ್ಲಿದೆ ? a) ಬೆಂಗಳೂರು b) ಭೋಪಾಲ್ c) ಸೂರತ್ d) ನೊಯಡಾ 10 / 100 10) ಕೆಳಗಿನವುಗಳಲ್ಲಿ ಯಾವುದು ಸರಿಯಿಲ್ಲ/ತಪ್ಪಾಗಿದೆ ? a) ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿರೇಖೆಯನ್ನು ರಾಡ್ಕ್ಲಿಫ್ ಲೈನ್ ಎಂದು ಕರೆಯಲಾಗುತ್ತದೆ. b) ಭಾರತ ಮತ್ತು ಚೀನಾದ ನಡುವಿನ ಗಡಿರೇಖೆಯನ್ನು ಮೆಕ್ಮೋಹನ್ ಲೈನ್ ಎಂದು ಕರೆಯಲಾಗುತ್ತದೆ. c) ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಗಡಿರೇಖೆಯನ್ನು ಡುರಾಂಡ್ ಲೈನ್ ಎಂದು ಕರೆಯಲಾಗುತ್ತದೆ. d) ಇವುಗಳಲ್ಲಿ ಯಾವುದೂ ಅಲ್ಲ 11 / 100 11) 69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 2023 ರಲ್ಲಿ, ಅತ್ಯುತ್ತಮ ನಟ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ ? a) ರಣಬೀರ್ ಕಪೂರ್ b) ಯಶ್ c) ಅಲ್ಲು ಅರ್ಜುನ್ d) ವಿಜಯ ದೇವರಕೊಂಡ 12 / 100 12) ಈ ಕೆಳಗಿನವರುಗಳಲ್ಲಿ ಯಾರು ಭಾರತೀಯ ಸೇನೆಯ ಫೀಲ್ಡ್ ಮಾರ್ಷಲ್ ಆಗಿದ್ದರು ? a) ಅಜಿತ್ ಡೋವಲ್ b) ಮನೋಜ್ ಪಾಂಡೆ c) ಕೆ.ಎಮ್. ಕಾರಿಯಪ್ಪ d) ಇವುಗಳಲ್ಲಿ ಯಾವುದೂ ಅಲ್ಲ 13 / 100 13) ಹಸಿರು ಮನೆ/ಗ್ರೀನ್ ಹೌಸ್ ಅನಿಲ ಮಿಥೇನ್ ಉತ್ಪಾದನೆ ಯೊಂದಿಗೆ ಯಾವ ಬೆಳೆ ಬೆಳೆಯುವುದು ಸಂಬಂಧಿಸಿದೆ ? a) ಜೋಳ b) ಸೇಬು c) ಅಕ್ಕಿ d) ಕಾಫಿ 14 / 100 14) ಈ ಕ್ರಮದಲ್ಲಿ ಮುಂದೆ ಏನು ಬರುತ್ತದೆ ? RNP, OKM, LHJ, a) EGI b) EIG c) IEG d) JKL 15 / 100 15) ಕೆಳಗಿನವುಗಳಲ್ಲಿ ಯಾವುದು ಆಧಾರ್ ಸಂಬಂಧವಾಗಿ ಉಚಿತವಲ್ಲ (ಸರಿಯಲ್ಲ) ? a) ಆಧಾರ್ ಸಂಖ್ಯೆಯಲ್ಲಿ 12 ಅಂಕೆಗಳಿವೆ. b) ಯುಐಡಿಎಐ (UIDAI) ಅನ್ನು ಮೊದಲಾಗಿ, ಭಾರತ ಸರ್ಕಾರದಿಂದ ಜನವರಿ, 2009 ರಲ್ಲಿ ಸ್ಥಾಪಿಸಲ್ಪಟ್ಟಿತು. c) ನಂದನ್ ನಿಲೇಕಣಿ ಅವರು ಯುಐಡಿಎಐ (UIDAI)ನ ಮೊದಲ ಅಧ್ಯಕ್ಷರು. d) ಇವುಗಳಲ್ಲಿ ಯಾವುದೂ ಅಲ್ಲ 16 / 100 16) ಈ ಕೆಳಗಿನ ಯಾವುದರಿಂದ ಕೋಮುವಾದವನ್ನು ನಿಗ್ರಹಿಸಬಹುದು ? a) ಮಕ್ಕಳಿಗೆ ಲೌಕಿಕ ಶಿಕ್ಷಣವನ್ನು ನೀಡುವುದರಿಂದ b) ಆರೋಗ್ಯಕರ ಮಾಧ್ಯಮ ಪರಿಸರವನ್ನು ಬೆಳೆಸುವುದರಿಂದ c) ಉತ್ತಮ ಕಾನೂನು ವ್ಯವಸ್ಥೆಯನ್ನು ಸ್ಥಾಪಿಸುವುದರಿಂದ d) ಇವುಗಳಲ್ಲಿ ಎಲ್ಲವೂ 17 / 100 17) ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ, ಹೊಂದಿಕೆ ಯಾಗುವ ಕೆಳಗಿನ ಪ್ರಧಾನ ವಿವಿಧ ಮಣ್ಣುಗಳನ್ನು ಪರಿಗಣಿಸಿ, ಸರಿಯಲ್ಲದ್ದನ್ನು ಆರಿಸಿ. a) ಉತ್ತರ ಕರ್ನಾಟಕ - ಕಪ್ಪು ಮಣ್ಣು b) ಕರಾವಳಿ ಕರ್ನಾಟಕ - ಲ್ಯಾಟರೈಟ್ ಮಣ್ಣು c) ದಕ್ಷಿಣ ಕರ್ನಾಟಕ - ಕೆಂಪು ಮಣ್ಣು d) ಇವುಗಳಲ್ಲಿ ಯಾವುದೂ ಅಲ್ಲ 18 / 100 18) ದಿನೇಶ್ ತನ್ನ ಗಡಿಯಾರವನ್ನು ಮೇಜಿನ ಮೇಲೆ ಇಡುತ್ತಾನೆ, ಸಂಜೆ 6 ಗಂಟೆಗೆ, ಗಂಟೆಯ ಮುಳ್ಳು ಉತ್ತರ ದಿಕ್ಕನ್ನು ತೋರಿಸುತ್ತದೆ. ರಾತ್ರಿ 9.15 ಗಂಟೆಗೆ, ನಿಮಿಷದ ಮುಳ್ಳು ಯಾವ ದಿಕ್ಕನ್ನು ತೋರಿಸುತ್ತದೆ ? a) ಆಗ್ನೇಯ b) ದಕ್ಷಿಣ c) ಉತ್ತರ d) ಪಶ್ಚಿಮ 19 / 100 19) ಸರಿಯಾದುದನ್ನು ಆಯ್ಕೆ ಮಾಡಿ a) ಶ್ವೇತ ಕ್ರಾಂತಿ X ಕಾಗದ ಕೈಗಾರಿಕೆ (ವೈಟ್ ರೆವಲ್ಯೂಶನ್) b) ನೀಲಿ ಕ್ರಾಂತಿ (ಬ್ಲೂ ರೆವಲ್ಯೂಶನ್) X ಅಂತರಿಕ್ಷ ಯಾನ ವಲಯ c) ಸುವರ್ಣ ಕ್ರಾಂತಿ (ಗೋಲ್ಡನ್ ರೆವಲ್ಯೂಶನ್) X ತೋಟಗಾರಿಕೆ ವಲಯ d) ಹಸಿರು ಕ್ರಾಂತಿ (ಗ್ರೀನ್ ರೆವಲ್ಯೂಶನ್) X ಅರಣ್ಯ ವಲಯ (ಕಾಡು ಪ್ರದೇಶ) 20 / 100 20) ಅಮೈನೋ ಆಮ್ಲಗಳಿಂದ ಮಾಡಲ್ಪಟ್ಟಿದೆ. a) ಶರ್ಕರ ಪಿಷ್ಟಾದಿಗಳು (ಕಾರ್ಬೊಹೈಡ್ರೆಟ್ಸ್) b) ಸಸಾರಜನಕ ಆಹಾರ ಪದಾರ್ಥ (ಪ್ರೋಟಿನ್ ) c) ಕೊಬ್ಬುಗಳು d) ಖನಿಜಗಳು 21 / 100 21) ಸರಿಯಾಗಿಲ್ಲದ ಒಂದನ್ನು ಆಯ್ಕೆ ಮಾಡಿ. a) ಕಾಕ್ರಾಪಾರ್ ಪರಮಾಣು ವಿದ್ಯುತ್ ಸ್ಥಾವರ x ಗುಜರಾತ್ b) ನರೋರ ಪರಮಾಣು ವಿದ್ಯುತ್ ಸ್ಥಾವರ x ಉತ್ತರ ಪ್ರದೇಶ c) ಕೈಗಾ ಪರಮಾಣು ವಿದ್ಯುತ್ ಸ್ಥಾವರ x ಕೇರಳ d) ತಾರಾಪುರ್ ಪರಮಾಣು ವಿದ್ಯುತ್ ಸ್ಥಾವರ x ಮಹಾರಾಷ್ಟ್ರ 22 / 100 22) ಕೆಳಗಿನವುಗಳಲ್ಲಿ ಯಾವುದು ಸಾಂಕ್ರಾಮಿಕ ರೋಗ ? a) ಕ್ಯಾನ್ಸರ್ (ಹುಣ್ಣುರೋಗ) b) ಡಯಾಬಿಟಿಸ್ (ಮಧುಮೇಹ) c) ಮೀಸಲ್ಸ್ (ದಡಾರ) d) ಅಧಿಕ ರಕ್ತದೊತ್ತಡ 23 / 100 23) ಭಾರತದಲ್ಲಿ ಗರ್ಭಧಾರಣೆಯ, ಸುರಕ್ಷಿತ ಮತ್ತು ಕಾನೂನುಬದ್ಧ ಮುಕ್ತಾಯದ, ಚೌಕಟ್ಟಿನ ರಚನೆಯನ್ನು...................ನಿಂದ ಒದಗಿಸಲಾಗುತ್ತದೆ. a) ಪ್ರಸವಪೂರ್ವ ಗರ್ಭಪಾತ ಕಾಯಿದೆಯ ವೈದ್ಯಕೀಯ ಮುಕ್ತಾಯ b) ಗರ್ಭಧಾರಣೆಯ ಕಾಯಿದೆಯ ಆಧುನಿಕ ಮುಕ್ತಾಯ c) ಗರ್ಭಧಾರಣೆಯ ಕಾಯಿದೆಯ ವೈದ್ಯಕೀಯ ಮುಕ್ತಾಯ d) ಇವುಗಳಲ್ಲಿ ಯಾವುದೂ ಅಲ್ಲ 24 / 100 24) ಶುದ್ಧ ಚಿನ್ನದ ಬಗ್ಗೆ, ಕೆಳಗಿನವುಗಳಲ್ಲಿ ಯಾವುದು ಸರಿ ? a) ಇದನ್ನು 24 ಕ್ಯಾರೆಟ್ ಚಿನ್ನ ಎಂದು ಕರೆಯಲಾಗುತ್ತದೆ. b) ಆಭರಣಗಳನ್ನು ತಯಾರಿಸಲು ಇದು ಸೂಕ್ತವಲ್ಲ. c) ಅದನ್ನು ಗಟ್ಟಿಯಾಗಿಸಲು ಬೆಳ್ಳಿ ಅಥವಾ ತಾಮ್ರ -ದೊಂದಿಗೆ ಮಿಶ್ರಲೋಹ ಮಾಡಲಾಗುತ್ತದೆ. d) ಇವುಗಳಲ್ಲಿ ಎಲ್ಲವೂ 25 / 100 25) ಕ್ರಿಮಿಯನ್ ಪರ್ಯಾಯ ದ್ವೀಪವು.......ನಿಂದ ಆವೃತ್ತವಾಗಿದೆ. a) ನಾರ್ಥ್ ಸೀ / ಉತ್ತರ ಸಮುದ್ರ b) ಬ್ಲಾಕ್ ಸೀ / ಕಪ್ಪು ಸಮುದ್ರ c) ಮೆಡಿಟರೇನಿಯನ್ ಸಮುದ್ರ d) ಕ್ಯಾಸ್ಪಿಯನ್ ಸಮುದ್ರ 26 / 100 26) ಒಬ್ಬ ವ್ಯಕ್ತಿಯು ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಹುದು ಆದರೆ ಹತ್ತಿರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಲಾಗುವುದಿಲ್ಲ. ಅವನಿಗೆ.................... ಇದೆ. a) ಸಮೀಪದೃಷ್ಟಿ b) ಹೈಪರ್ಮೆಟ್ರೋಪಿಯಾ c) ಪ್ರೆಸ್ಬಯೋಪಿಯ d) ಬಣ್ಣ- ಕುರುಡುತನ 27 / 100 27) ಕೆಳಗಿನವುಗಳಲ್ಲಿ ಯಾವುದು ಏಕೈಕ ಜೀವಿಯಿಂದ ಸಂತಾನೋತ್ಪತ್ತಿಯ ವಿಧಾನವಲ್ಲ ? a) ವಿದಳನ b) ಸಮ್ಮಿಳನ c) ಮೊಳಕೆಯೊಡೆವಿಕೆ d) ವಿಘಟನೆ 28 / 100 28) ಭಾರತೀಯ ಸಂವಿಧಾನಕ್ಕೆ ಸಂಬಂಧಿಸಿದಂತೆ, ಸರಿಯಾದುದನ್ನು ಆಯ್ಕೆ ಮಾಡಿ. a) ವಿಭಾಗ V ರಾಜ್ಯಗಳು b) ವಿಭಾಗ VI- ಕೇಂದ್ರಾಡಳಿತ ಪ್ರದೇಶಗಳು c) ವಿಭಾಗ VII – ನ್ಯಾಯಾಂಗ d) ವಿಭಾಗ IX - ಪಂಚಾಯತಿಗಳು 29 / 100 29) ವಿದ್ಯುತ್ ಪ್ರವಾಹದ ಎಸ್ಐ (SI) ಘಟಕವು a) ಆ್ಯಂಪಿಯರ್ b) ವ್ಯಾಟ್ c) ವೋಲ್ಟ್ d) ಜೂಲ್ 30 / 100 30) ಕೆಳಗಿನ ರಾಜ್ಯಗಳಲ್ಲಿ ಯಾವುದು ಎರಡು ರಾಷ್ಟ್ರಗಳೊಂದಿಗೆ ಅಂತರಾಷ್ಟ್ರೀಯ ಗಡಿಗಳನ್ನು ಹೊಂದಿದೆ a) ತ್ರಿಪುರ b) ಮಿಜೋರಾಮ್ c) ನಾಗಾಲ್ಯಾಂಡ್ d) ಮಣಿಪುರ 31 / 100 31) 2024ರ ಬೇಸಿಗೆ ಓಲಿಂಪಿಕ್ಸ್.....................ನಲ್ಲಿ ನಡೆಯಲಿದೆ. a) ಲಾಸ್ ಎಂಜಲೀಸ್ b) ಟೋಕಿಯೊ c) ಬ್ರಿಸ್ಟೇನ್ d) ಪ್ಯಾರಿಸ್ 32 / 100 32) ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಗರಹವೇಲಿ, ಡಿಯು ಮತ್ತು ದಮನ್ಗಳ ಆಡಳಿತಾತ್ಮಕ ರಾಜಧಾನಿ a) ದಾದ್ರಾ b) ಸಿಲ್ವಾಸಾ c) ದಮನ್ d) ದಿಯು 33 / 100 33) ಕೆಳಗಿನವುಗಳಲ್ಲಿ, ಯಾವುದು ಆಹಾರದಲ್ಲಿನ ಕಲಬೆರಕೆಗಳನ್ನು ಪತ್ತೆ ಹಚ್ಚುವ ವಿಧಾನವಲ್ಲ ? a) ಆರ್ಗೆಮೋನ್ ಬೀಜಗಳೊಂದಿಗೆ ಕಲಬೆರಕೆ ಮಾಡಿದ ಸಾಸಿವೆ ಬೀಜಗಳು - ಒತ್ತಿದರೆ, ಸಾಸಿವೆ ಬೀಜಗಳು ಒಳಗೆ ಹಳದಿಯಾಗಿರುತ್ತವೆ, ಆದರೆ ಆರ್ಗೊಮೋನ್ ಬೀಜಗಳು ಬಿಳಿಯಾಗಿರುತ್ತವೆ. b) ಸೀಮೆಸುಣ್ಣದೊಂದಿಗೆ ಕಲಬೆರಕೆ ಮಾಡಿದ ಸಕ್ಕರೆ - ಒಂದು ಲೋಟ ನೀರಿನಲ್ಲಿ ಸಕ್ಕರೆಯನ್ನು ಕರಗಿಸಿದಾಗ, ಸೀಮೆಸುಣ್ಣ ಕೆಳಭಾಗದಲ್ಲಿ ನೆಲೆಗೊಳ್ಳುತ್ತದೆ c) ಸಕ್ಕರೆ ನೀರಿನೊಂದಿಗೆ ಕಲಬೆರಕೆ ಮಾಡಿದ ಜೇನುತುಪ್ಪ - ಜೇನುತುಪ್ಪದಲ್ಲಿ ಅದ್ದಿದ ಹತ್ತಿಯ ಬತ್ತಿಯನ್ನು ಬೆಂಕಿ ಕಡ್ಡಿಯಿಂದ ಹೊತ್ತಿಸಿದಾಗ ಉರಿಯುತ್ತದೆ, ಕಲಬೆರಕೆಯಾದರೆ, ನೀರಿನ ಉಪಸ್ಥಿತಿಯು ಜೇನುತುಪ್ಪವನ್ನು ಸುಡಲು ಅನುಮತಿಸುವುದಿಲ್ಲ ಮತ್ತು ಹಾಗೆ ಅದನ್ನು ಮಾಡಿದರೆ, ಅದು ಕ್ರ್ಯಾಕ್ಲಿಂಗ್ (ಚಟಪಟ) ಶಬ್ದವನ್ನು ಉಂಟು ಮಾಡುತ್ತದೆ. d) ಚಿಕೋರಿಯೊಂದಿಗೆ ಕಲಬೆರಕೆ ಮಾಡಿದ ಕಾಫಿ-ನಮೂನೆಯ ಮೇಲೆ ಲೋಹಚುಂಬಕವನ್ನು ಚಲಿಸಿದಾಗ ಚಿಕೋರಿ ಲೋಹ ಚುಂಬಕಕ್ಕೆ ಅಂಟಿಕೊಳ್ಳುತ್ತದೆ. 34 / 100 34) ಬೆಂಗಳೂರು ನಗರವು ವರ್ಷದಲ್ಲಿ ಪೊಲೀಸ್ ಕಮಿಷನರೇಟ್ ಆಯಿತು. a) 1956 b) 1963 c) 1973 d) 1974 35 / 100 35) ಕರ್ನಾಟಕದ..................... ಜಿಲ್ಲೆಯಲ್ಲಿರುವ ಸಂಗನಕಲ್ಲು, ನವಶಿಲಾಯುಗದ ಅವಧಿಯ (ಸುಮಾರು 3000 ಬಿಸಿ) ಪುರಾತನ ಪುರಾತತ್ವ ಸ್ಥಳವಾಗಿದೆ. a) ಕೊಪ್ಪಳ b) ರಾಯಚೂರು c) ಬಳ್ಳಾರಿ d) ದಾವಣಗೆರೆ 36 / 100 36) ಸಮಕಾಲೀನ ಪಟ್ಟಿಯಲ್ಲಿ ಉಲ್ಲೇಖಿಸಲಾದ ವಿಷಯಕ್ಕೆ ಸಂಬಂಧಿಸಿದ ಕಾನೂನುಗಳನ್ನು ಯಾರು ಮಾಡಬಹುದು ? a) ಕೇಂದ್ರ (ಒಕ್ಕೂಟ) ಸರ್ಕಾರ b) ರಾಜ್ಯ ಸರ್ಕಾರ c) ಸರ್ವೋಚ್ಚ ನ್ಯಾಯಾಲಯ d) (a) ಮತ್ತು (b) ಎರಡೂ 37 / 100 37) ಒಟ್ಟು ರಾಷ್ಟ್ರೀಯ ಉತ್ಪನ್ನವು......................... ಗೆ ಸಂಬಂಧಿಸಿದ ಶಬ್ದವಾಗಿದೆ. a) ಆರ್ಥಿಕತೆ b) ಕೃಷಿ c) ಅರಣ್ಯ ಉತ್ಪನ್ನಗಳು d) ಜನನ ಪ್ರಮಾಣ 38 / 100 38) ಐಆರ್-20, ಜಯ ಮತ್ತು ರತ್ನ......................ನ ವಿಧಗಳು. a) IR-20 b) ಗೋಧಿ c) ಮಿಲೆಟ್/ರಾಗಿ, ನವಣೆ ಮೊದಲಾದ ಧಾನ್ಯಗಳು d) ಅಡಿಕೆ 39 / 100 39) ಸಾಮಾನ್ಯವಾಗಿ ಯಾವ ಉದಾತ್ತ ಅನಿಲವನ್ನು ಬಲೂನ್ಗಳಲ್ಲಿ ಲಿಫ್ಟಿಂಗ್ ಅನಿಲವಾಗಿ ಬಳಸಲಾಗುತ್ತದೆ ? a) ಹೀಲಿಯಂ b) ಆರ್ಗಾನ್ c) ಕ್ರಿಪ್ಟಾನ್ d) ರೇಡಾನ್ 40 / 100 40) ಕ್ಯಾಸೋವರಿಗಳು, ಡೋಡೋ ಮತ್ತು ರಿಯಾ...................ನ ಉದಾಹರಣೆಗಳು. a) ಅಳಿವಿನಂಚಿನಲ್ಲಿರುವ ಸಸ್ತನಿಗಳು b) ಕಠಿಣಚರ್ಮಿಗಳು c) ಹಾರಲಾಗದ ಪಕ್ಷಿಗಳು d) ವೇಗವಾಗಿ ಚಲಿಸುವ ಸರೀಸೃಪಗಳು 41 / 100 41) ಕೆಳಗಿನವುಗಳಲ್ಲಿ ಯಾವುದು ಯುಎನ್ಇಪಿ (UNEP) ಯ ಪೂರ್ಣ ರೂಪ ? a) ಯುನೈಟೆಡ್ ನೇಷನ್ಸ್ ಎಜುಕೇಶನ್ ಪ್ರೋಗ್ರಾಮ್ (ವಿಶ್ವ ಸಂಸ್ಥೆಯ ಶಿಕ್ಷಣ ಕಾರ್ಯಕ್ರಮ) b) ಯುನೈಟೆಡ್ ನೇಷನ್ಸ್ ಎರಾಡಿಕೇಶನ್ ಪ್ರೋಗ್ರಾಮ್ (ವಿಶ್ವಸಂಸ್ಥೆಯ ನಿರ್ಮೂಲನ ಕಾರ್ಯಕ್ರಮ) c) ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಮ್ (ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮ) d) ಯುನೈಟೆಡ್ ನೇಷನ್ಸ್ ಎಂಪ್ಲಾಯ್ಮೆಂಟ್ ಪ್ರೋಗ್ರಾಮ್ (ವಿಶ್ವ ಸಂಸ್ಥೆಯ ಉದ್ಯೋಗ ಕಾರ್ಯಕ್ರಮ) 42 / 100 42) ಕೆಳಗಿನ ಹೇಳಿಕೆಗಳನ್ನು ಗಮನಿಸಿ, ಸರಿಯಾಗಿಲ್ಲದ್ದನ್ನು ಆಯ್ಕೆ ಮಾಡಿ. a) 1989 ಕ್ಕಿಂತ ಮೊದಲು ಭಾರತದಲ್ಲಿ ಕನಿಷ್ಠ ಮತದಾನ ವಯಸ್ಸು 21 ವರ್ಷಗಳು. 1989 ರ 61ನೇ ತಿದ್ದುಪಡಿಯ ಮೂಲಕ ಮತದಾನವನ್ನು 21 ವರ್ಷಗಳಿಂದ 18 ವರ್ಷಗಳಿಗೆ ಇಳಿಸಲಾಯಿತು b) 1976 ರಲ್ಲಿ 42ನೇ ತಿದ್ದುಪಡಿಯ ಮೂಲಕ ಸಂವಿಧಾನದ ಪೀಠಿಕೆಯಲ್ಲಿ, 'ಸಮಾಜವಾದಿ' ಮತ್ತು 'ಜಾತ್ಯತೀತ' ಪದಗಳನ್ನು ಅಳವಡಿಸಲಾಯಿತು. c) ಮೂಲಭೂತ ಕರ್ತವ್ಯಗಳನ್ನು 1976 ರಲ್ಲಿ, 42 ತಿದ್ದುಪಡಿ ಮೂಲಕ ನಮ್ಮ ಸಂವಿಧಾನದಲ್ಲಿ ಅಳವಡಿಸಲಾಗಿದೆ. ಮೂಲಭೂತ ಕರ್ತವ್ಯಗಳನ್ನು ಲೇಖನ 51(A) ಅಡಿಯಲ್ಲಿ ಸೇರಿಸಲಾಗಿದೆ d) ಇವುಗಳಲ್ಲಿ ಯಾವುದೂ ಅಲ್ಲ 43 / 100 43) ತರಕಾರಿ ಪದಾರ್ಥಗಳನ್ನು ಮಿಶ್ರಗೊಬ್ಬರವಾಗಿ ವಿಭಜಿಸುವುದು................ ಗೆ ಉದಾಹರಣೆಯಾಗಿದೆ a) ಉಷ್ಣಕ್ಷೇಪಕ ಪ್ರತಿಕ್ರಿಯೆ b) ಉಷ್ಣಗ್ರಾಹಕ ಪ್ರತಿಕ್ರಿಯೆ c) ಸ್ಥಾನಪಲ್ಲಟ ಪ್ರತಿಕ್ರಿಯೆ d) ಇವುಗಳಲ್ಲಿ ಯಾವುದೂ ಅಲ್ಲ 44 / 100 44) ಭೂಮಿಯ ವಾತಾವರಣದಲ್ಲಿ ಹೆಚ್ಚು ಹೇರಳವಾಗಿರುವ ಅನಿಲ ಯಾವುದು? a) ಆಮ್ಲಜನಕ b) ಸಾರಜನಕ c) ಜಲಜನಕ d) ಇವುಗಳಲ್ಲಿ ಯಾವುದೂ ಅಲ್ಲ 45 / 100 45) ಕೇಂದ್ರ ಸರ್ಕಾರದಿಂದ ಪರಿಚಯಿಸಲ್ಪಟ್ಟ ಎಬಿಎಚ್ಎ (ABHA).................ಗೆ ಸಂಬಂಧಿಸಿದೆ. a) ಆರೋಗ್ಯ b) ವಾಯುಯಾನ c) ಸಾರ್ವಜನಿಕ ವಿತರಣೆ d) ಉನ್ನತ ಶಿಕ್ಷಣ 46 / 100 46) ಆಧುನಿಕ ಆವರ್ತ ಕೊಷ್ಟಕವು...................ಅನ್ನು ಹೊಂದಿದೆ. a) 'ಅವಧಿಗಳು' ಎಂದು ಕರೆಯಲ್ಪಡುವ 7 ಅಡ್ಡಸಾಲುಗಳು ಮತ್ತು 'ಗುಂಪುಗಳು' ಎಂದು ಕರೆಯಲ್ಪಡುವ 18 ಲಂಬ ಕಾಲಮ್ಗಳು. b) 'ಗುಂಪುಗಳು' ಎಂದು ಕರೆಯಲ್ಪಡುವ 7 ಅಡ್ಡಸಾಲುಗಳು ಮತ್ತು 'ಅವಧಿಗಳು' ಎಂದು ಕರೆಯಲ್ಪಡುವ 18 ಲಂಬ ಕಾಲಮ್ಗಳು. c) 'ಗುಂಪುಗಳು' ಎಂದು ಕರೆಯಲ್ಪಡುವ 7 ಲಂಬ ಕಾಲಮ್ಗಳು ಮತ್ತು 'ಅವಧಿಗಳು' ಎಂದು ಕರೆಯಲ್ಪಡುವ 18 ಅಡ್ಡಸಾಲುಗಳು. d) 'ಅವಧಿಗಳು' ಎಂದು ಕರೆಯಲ್ಪಡುವ 7 ಲಂಬ ಕಾಲಮ್ಗಳು ಮತ್ತು 'ಗುಂಪುಗಳು' ಎಂದು ಕರೆಯಲ್ಪಡುವ 18 ಅಡ್ಡಸಾಲುಗಳು. 47 / 100 47) ಕೆಳಗಿನವುಗಳಲ್ಲಿ ಯಾವ ದೇಶ ಯುಎನ್ಸಿ (UNSC) ಯ ಸದಸ್ಯವಲ್ಲ ? a) ಭಾರತ b) ಜಪಾನ್ c) ಫ್ರಾನ್ಸ್ d) ಚೀನಾ 48 / 100 48) ಕೆಳಗಿನವುಗಳಲ್ಲಿ ಯಾವುದು, ಹವಾಮಾನ ಬದಲಾವಣೆಗೆ ಒಂದು ಉದಾಹರಣೆ ಅಲ್ಲ ? a) ಕುಗ್ಗುತ್ತಿರುವ ಪರ್ವತ ಹಿಮನದಿಗಳು b) ಸಾಗರ ಆಮ್ಮ್ಲಿಕರಣ c) ಮಾನ್ಸೂನ್ ಮಳೆ ಜೂನ್ನಲ್ಲಿ ಸಂಭವಿಸುವುದು d) ಗ್ರೀನ್ಲ್ಯಾಂಡ್ನಲ್ಲಿ ಹಿಮ ಕರಗುವಿಕೆಯನ್ನು ವೇಗಗೊಳಿಸುವುದು 49 / 100 49) ಕೆಳಗಿನವುಗಳಲ್ಲಿ ಯಾವುದು ನವೀಕರಿಸಬಹುದಾದ ಶಕ್ತಿ ? a) ಉಬ್ಬರವಿಳಿತದ ಶಕ್ತಿ b) ನೈಸರ್ಗಿಕ ಅನಿಲ c) ಪವನಶಕ್ತಿ d) ಸೌರಶಕ್ತಿ 50 / 100 50) ವಸ್ತುವನ್ನು ಎಸೆಯುವಾಗ, ಹೆಚ್ಚಿನ ದೂರವನ್ನು ಸಾಧಿಸಲು ಯಾವ ಕೋನದ ಮುಂದೆ ಸೂಕ್ತವಾಗಿದೆ ? a) 90 ಡಿಗ್ರಿಗಳು b) 60 ಡಿಗ್ರಿಗಳು c) 45 ಡಿಗ್ರಿಗಳು d) 30 ಡಿಗ್ರಿಗಳು 51 / 100 51) ಕೆಳಗಿನವುಗಳಲ್ಲಿ ಯಾವುದು, ಭಾರತೀಯ ಉಪಗ್ರಹ ನೌಕಾವಿದ್ಯೆ/ಜಲಸಂಚಾರ ವ್ಯವಸ್ಥೆ ? a) ಬಿಡೌ b) ಗೆಲಿಲಿಯೊ c) ಜಿಎಲ್ಎನ್ಎಸ್ಎಸ್ (GLONASS) d) ಎನ್ ಎ ವಿ ಐ ಸಿ (NavIC) 52 / 100 52) ಈ ಕೆಳಗಿನವುಗಳಲ್ಲಿ ಯಾವ ದೇಶವು ಇಸ್ರೇಲ್ನೊಂದಿಗೆ ಗಡಿ ಹಂಚಿಕೊಳ್ಳುವುದಿಲ್ಲ ? a) ಸಿರಿಯಾ b) ಜೋರ್ಡಾನ್ c) ಇರಾಕ್ d) ಈಜಿಪ್ಟ್ 53 / 100 53) ಹಣದುಬ್ಬರವಿಳಿತ ಎಂದರೇನು ? a) ಆರ್ಬಿಐ ರೆಪೊ ದರದಲ್ಲಿ ಹೆಚ್ಚಳ b) ಸರಕು ಮತ್ತು ಸೇವೆಗಳ ಸಾಮಾನ್ಯ ಬೆಲೆಮಟ್ಟದಲ್ಲಿ ಇಳಿಕೆ c) ಆರ್ಬಿಐ ರೆಪೊ ದರದಲ್ಲಿ ಇಳಿಕೆ d) ಸರಕು ಮತ್ತು ಸೇವೆಗಳ ಸಾಮಾನ್ಯ ಬೆಲೆಮಟ್ಟದಲ್ಲಿ ಹೆಚ್ಚಳ 54 / 100 54) ಮೈಚಾಂಗ್ ಚಂಡಮಾರುತವು ಈ ಕೆಳಗಿನ ಯಾವ ನಗರಗಳಲ್ಲಿ ಭಾರೀ ಮಳೆ ಮತ್ತು ಪ್ರವಾಹಕ್ಕೆ ಕಾರಣವಾಯಿತು ? a) ಭಾವನಗರ್ b) ಚೆನ್ನೈ c) ಕೊಲ್ಕತ್ತಾ d) ಮುಂಬೈ 55 / 100 55) ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿದೆ ? (i) ಕಪ್ಪು ವಸ್ತುವು ಬೆಳಕಿನ ಎಲ್ಲಾ ತರಂಗಾಂತರಗಳನ್ನು ಹೀರಿಕೊಳ್ಳುತ್ತದೆ ಮತ್ತು ಯಾವುದನ್ನೂ ಪ್ರತಿಬಿಂಬಿಸುವುದಿಲ್ಲ. (ii) ವಸ್ತುವು ಎಲ್ಲಾ ವಿಭಿನ್ನ ತರಂಗಾಂತರಗಳನ್ನು ಪ್ರತಿಬಿಂಬಿಸುತ್ತದೆ. (iii) ಕೆಂಪು ವಸ್ತುಗಳು ಕೆಂಪು ಹೊರತುಪಡಿಸಿ, ಎಲ್ಲಾ ತರಂಗಾಂತರಗಳನ್ನು ಹೀರಿಕೊಳ್ಳುತ್ತದೆ a) (i) b) (ii) c) (i) (ii) d) (i), (ii) (iii) 56 / 100 56) ಪ್ರಸರಣ ಎಂದರೆ a) ವಸ್ತು ಅಥವಾ ಬೆಳಕು, ಶಾಖ ಅಥವಾ ಶಬ್ದದ ಮೇಲೈಯಿಂದ ಅದನ್ನು ಹೀರಿಕೊಳ್ಳದೆ ಹಿಂದಕ್ಕೆ ಎಸೆಯುವುದು b) ತರಂಗವು ಒಂದು ಮಾಧ್ಯಮದಿಂದ ಇನ್ನೊಂದಕ್ಕೆ ಹಾದುಹೋಗುವಾಗ ಅದರ ಮರುನಿರ್ದೇಶನ c) ವಸ್ತುವಿನ ಸ್ಥಿತಿಯನ್ನು ಅನಿಲ ಹಂತದಿಂದ ದ್ರವ ಹಂತಕ್ಕೆ ಬದಲಾಯಿಸುವುದು d) ಹೆಚ್ಚಿನ ಸಾಂದ್ರತೆಯ ಪ್ರದೇಶದಿಂದ/ವಲಯ ದಿಂದ ಕಡಿಮೆ ಸಾಂದ್ರತೆಯ ಪ್ರದೇಶಕ್ಕೆ ವಸ್ತುವಿನ ಚಲನೆ 57 / 100 57) ಡಿಸೆಂಬರ್ 1, 2023 ರಂದು, ಬೆಂಗಳೂರು ನಗರದ ಕೆಳಗಿನ ಯಾವ ಸಂಸ್ಥೆಗಳು ಬಹು ಬಾಂಬ್/ಸಿಡಿಗುಂಡು ಬೆದರಿಕೆ ಇಮೇಲ್ಗಳನ್ನು ಸ್ವೀಕರಿಸಿವೆ ? a) ಮಾಲ್ಗಳು (ಆವರಣವುಳ್ಳ ಮಾಳಿಗೆಗಳ ಸಂಕೀರ್ಣ) b) ಶಾಲೆಗಳು c) ಐಟಿ ಕಂಪನಿಗಳು d) ಸರ್ಕಾರಿ ಕಛೇರಿಗಳು 58 / 100 58) ಡೆಂಗ್ಯೂ ವೈರಸ್ ಮೂಲಕ ಹರಡುತ್ತದೆ. a) ನೀರು b) ಗಾಳಿ c) ಸೊಳ್ಳೆ d) ತಿಗಣೆ 59 / 100 59) ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ a) ಬ್ರಹ್ಮಗಿರಿ b) ಮುಳ್ಳಯ್ಯನಗಿರಿ c) ನಂದಿ ಬೆಟ್ಟ d) ಕೊಡಚಾದ್ರಿ 60 / 100 60) ಕೆಳಗಿನ ಯಾವ ವಸ್ತುವು ಸ್ಫೋಟಕ ಅಲ್ಲ ? a) ಟಿಎನ್ಟಿ b) ಆರ್ಡಿಎಕ್ಸ್ c) ಎಚ್ಎಮ್ಎಕ್ಸ್ d) ಅಮೋನಿಯಂ ಕಾರ್ಬೊನೇಟ್ 61 / 100 61) ವಿಶ್ವದ ಅತಿದೊಡ್ಡ ಸೌರ ಪಾರ್ಕ್ಗಳಲ್ಲಿ ಒಂದಾದ, 'ಭಡ್ಲಾ ಸೋಲಾರ್ ಪಾರ್ಕ್'.....................ನಲ್ಲಿದೆ. a) ಉತ್ತರ ಪ್ರದೇಶ b) ರಾಜಸ್ಥಾನ c) ಗುಜರಾತ್ d) ತೆಲಂಗಾಣ 62 / 100 62) ಯಾವ ಸಸ್ಯವು ಎಲೆಗಳಿಂದ ಹರಡುತ್ತದೆ (ಸಂತಾನಾಭಿವೃದ್ಧಿಯಾಗುತ್ತದೆ) ? a) ಸಿಲ್ವರ್ ಓಕ್ b) ಲಿಚಿ c) ಬ್ರಯೋಫಿಲ್ಲಮ್ d) ಬರ್ ಮರ 63 / 100 63) ಪ್ರೋಬಯೊಟಿಕ್ಗಳು a) ಕಾಳುಗಳು b) ಕೀಟಗಳು c) ಸೂಕ್ಷ್ಮ ಜೀವಿಗಳು d) ಅನಿಮಲ್ ಪ್ರೋಟೀನ್ (ಸಸಾರಜನಕ ಆಹಾರ ಪದಾರ್ಥ) 64 / 100 64) ಪಂಪಾ ಸಾಗರ ಅಣೆಕಟ್ಟು ಯಾವ ನದಿಯ ಮೇಲೆ ಕಟ್ಟಲಾಗಿದೆ ? a) ಶರಾವತಿ ನದಿ b) ಕಾವೇರಿ ನದಿ c) ತುಂಗಭದ್ರಾ ನದಿ d) ಕೃಷ್ಣನದಿ 65 / 100 65) ಹೆಚ್ಚು ಕಾಲ ಅಗಿಯುವಾಗ, ಚಪಾತಿ ಜಾಸ್ತಿ ಸಿಹಿಯಾಗಿ ರುಚಿಯಾಗಲು ಕಾರಣವೇನು ? a) ನೀರಿನ ಅಂಶ ಜಾಸ್ತಿಯಾಗುವುದರಿಂದ b) ಲಾಲಾರಸವು ಪಿಷ್ಟವನ್ನು ಸರಳ ಸಕ್ಕರೆಯಾಗಿ ವಿಭಜಿಸುತ್ತದೆ. c) ಕ್ಯಾಲ್ಸಿಯಂ ಸೇರ್ಪಡೆಯಿಂದಾಗಿ d) ಇವುಗಳಲ್ಲಿ ಯಾವುದೂ ಅಲ್ಲ 66 / 100 66) (ಪ್ಲಾಸ್ಟರ್ ಆಫ್ ಪ್ಯಾರಿಸ್) ಪ್ಲಾಸ್ಟರ್ನಿಂದ ತಯಾರಿಸಿದ ಹೊದಿಕೆಯನ್ನು -ನಿಂದ ತಯಾರಿಸಲಾಗುತ್ತದೆ. a) ಬಿಳಿ ಸಿಮೆಂಟು / ಕಲ್ಲುಗಾರೆ b) ಜಿಪ್ಸಮ್/ಬಿಳಿ ಶಿಲೆಯಂಥ ಸೀಮೆಸುಣ್ಣ c) ಗಾಜು d) ಗ್ರಾಫೈಟ್ 67 / 100 67) ನರ್ಮದಾ ಬಚಾವ್ ಆಂದೋಲನದ ನೇತೃತ್ವವನ್ನು ವಹಿಸಿದ್ದರು. a) ಮಹಾತ್ಮ ಗಾಂಧಿ b) ಸುಂದರಲಾಲ್ ಬಹುಗುಣ c) ಮೇಧಾ ಫಾಟ್ಕರ್ d) ಪಾಂಡುರಂಗ ಹೆಗಡೆ 68 / 100 68) ಆಲೂಗಡ್ಡೆ ಚಿಪ್ಸ್ / ಹುರಿದ ತುಂಡುಗಳ ಪ್ಯಾಕೆಟ್ (ಪೊಟ್ಟಣಗಳು) ಸಾರಜನಕ ಅನಿಲದಿಂದ ಏಕೆ ತುಂಬಿವೆ a) ಸಾರಜನಕವು ಜಡ ಅನಿಲವಾಗಿದ್ದು, ಚಿಪ್ಸ್ಗಳ ಆಮ್ಲಜನೀಕರಣವನ್ನು ತಡೆಯುತ್ತದೆ. b) ಸಾರಜನಕದೊಂದಿಗೆ ಪೊಟ್ಟಣ ತಯಾರಿಸುವುದು, ಆಮ್ಲಜನಕ ಬಳಸುವುದಕ್ಕಿಂತ ಅಗ್ಗವಾಗಿದೆ. c) ಸಾರಜನಕವು ಚಿಪ್ಸ್ಗಳ ಹುದುವಿಕೆಗೆ / ಕಿಣ್ವನಕ್ಕೆ ಕಾರಣವಾಗುತ್ತದೆ. d) ಸಾರಜನಕ ಅನಿಲವು ಚಿಪ್ಗಳಿಂದ ತೇವಾಂಶವನ್ನು ಹೀರುತ್ತದೆ. 69 / 100 69) ಇತ್ತೀಚೆಗೆ ಸುದ್ದಿಯಲ್ಲಿದ್ದ ಸ್ಯಾಮ್ ಆಲ್ಡ್ಮನ್, ದೊಂದಿಗೆ ಸಂಬಂಧಿಸಿದ್ದಾರೆ. a) ಬಿಟ್ ಕಾಯಿನ್ b) ಚ್ಯಾಟ್ ಜಿಪಿಟಿ c) ಟೆಸ್ಲಾ d) ಗೂಗಲ್ 70 / 100 70) ಖೇಡಾ ಸತ್ಯಾಗ್ರಹದ ನೇತೃತ್ವವನ್ನು.....................ವಹಿಸಿದ್ದರು. a) ಮಹಾತ್ಮ ಗಾಂಧಿ b) ಜವಹರಲಾಲ್ ನೆಹರೂ c) ಅನ್ನಿ ಬೆಸೆಂಟ್ d) ಅಲ್ಲೂರಿ ಸೀತಾರಾಮ ರಾಜು 71 / 100 71) ಯಾವ ಸಂಸ್ಥೆ ಭಾರತದ ಪ್ರಧಾನ ಮಂತ್ರಿಯನ್ನು ರಕ್ಷಿಸುತ್ತದೆ ? a) ಎನ್ಎಸ್ಜಿ b) ಸಿ ಬಿ ಐ c) ಎಸ್ಪಿಜಿ d) ಸಿಆರ್ಪಿಎಫ್ 72 / 100 72) ಭಾರತದ ಮೊದಲ ಮಹಿಳಾ ರಾಷ್ಟ್ರಾಧ್ಯಕ್ಷೆ ಯಾರು ? a) ಸುಷ್ಮಾ ಸ್ವರಾಜ್ b) ಇಂದಿರಾ ಗಾಂಧಿ c) ದೌಪದಿ ಮುರ್ಮು d) ಪ್ರತಿಭಾ ದೇವಿಸಿಂಗ್ ಪಾಟೀಲ್ 73 / 100 73) ಮಾವಿನ ತುಂತುರು (Mango showers) ಮಳೆಯಾಗಿದ್ದು....................ನಲ್ಲಿ ಸಂಭವಿಸುತ್ತದೆ a) ಮಾರ್ಚ್ ನಿಂದ ಮೇ b) ಡಿಸೆಂಬರ್ ನಿಂದ ಜನವರಿ c) ಆಗಸ್ಟ್ d) ಅಕ್ಟೋಬರ್ ನಿಂದ ನವೆಂಬರ್ 74 / 100 74) ಕ್ವೋ ವಾರಂಟೊದ ಮುಖ್ಯ ಗುರಿ................... ತಡೆಗಟ್ಟುವಿಕೆ. a) ಅಕ್ರಮ ವಲಸೆ b) ಸಾರ್ವಜನಿಕ ಆಸ್ತಿ ಅತಿಕ್ರಮಣ c) ಸಾರ್ವಜನಿಕ ಹಣಕಾಸು ದುರುಪಯೋಗ d) ಸಾರ್ವಜನಿಕ ಕಚೇರಿಯ ಅಕ್ರಮ ಬಳಸುವಿಕೆ 75 / 100 75) ನಮ್ಮ ಸಂವಿಧಾನದ ಪೀಠಿಕೆಯಲ್ಲಿ, ಸಮಾಜವಾದಿ (ಸೋಷಿಯಲಿಸ್ಟ್) ಮತ್ತು ಜಾತ್ಯತೀತ (ಸೆಕ್ಯುಲರ್) ಪದಗಳನ್ನು ಸೇರಿಸಿದ ತಿದ್ದುಪಡಿ......................ಆಗಿದೆ a) 23 ನೇ ತಿದ್ದುಪಡಿ b) ಮೊದಲನೇ ತಿದ್ದುಪಡಿ c) 78 ನೇ ತಿದ್ದುಪಡಿ d) 42 ನೇ ತಿದ್ದುಪಡಿ 76 / 100 76) ರಾಜ್ಯ ಶಾಸನಾಂಗವು ಅಧಿವೇಶನದಲ್ಲಿಲ್ಲದಾಗ, ಸುಗ್ರೀವಾಜ್ಞೆ ಯನ್ನು ಮೂಲಕ ಹೊರಡಿಸಲಾಗುತ್ತದೆ a) ರಾಜ್ಯದ ಮುಖ್ಯಮಂತ್ರಿಯವರು b) ರಾಜ್ಯದ ರಾಜ್ಯಪಾಲರು c) ಭಾರತದ ರಾಷ್ಟ್ರಪತಿ d) ಕಾನೂನು ಮಂತ್ರಿ 77 / 100 77) ಕೆಳಗಿನ ಯಾವ ಪುಸ್ತಕವನ್ನು ಎ.ಎನ್. ಮೂರ್ತಿ ರಾಷ್ಟ್ರ ರವರು ಬರೆದಿದ್ದಾರೆ ? a) ತುಘಲಕ್ b) ದೇವರು c) ಮಂದ್ರ d) ಮರಳಿ ಮಣ್ಣಿಗೆ 78 / 100 78) ಒಬ್ಬ ಪೋಲೀಸ್ ಅಧಿಕಾರಿಯು, ಅವನ/ಅವಳ ಭುಜದ ಪಟ್ಟಿಯ ಮೇಲೆ ಒಂದು ನಕ್ಷತ್ರ/ಸ್ಟಾರ್ವನ್ನು ಹೊಂದಿದ್ದರೆ, ಆ ಅಧಿಕಾರಿಯು............ a) ಸಹಾಯಕ ಸಬ್ ಇನ್ಸ್ಪೆಕ್ಟರ್ b) ಸಬ್ ಇನ್ಸ್ಪೆಕ್ಟರ್ c) ಇನ್ಸ್ಪೆಕ್ಟರ್ d) ಪೊಲೀಸ್ ವರಿಷ್ಠಾಧಿಕಾರಿ 79 / 100 79) ಕರ್ನಾಟಕ ಪೊಲೀಸ್ನಲ್ಲಿ, ಸಿ.ಎ.ಆರ್......................ಸೂಚಿಸುತ್ತದೆ a) ಸೆಂಟ್ರಲ್ ಆರ್ಮ್ಸ್ ರಾಂಕ್ಸ್ (ಕೇಂದ್ರ ಸಶಸ್ತ್ರ ಶ್ರೇಣಿಗಳು) b) ಸಿಟಿ ಆರ್ಮ್ಸ್ ರಿಸರ್ವ್ (ನಗರ ಸಶಸ್ತ್ರ ಮೀಸಲು) c) ಕಮೀಷನರ್ ಅಸಾಲ್ಟ್ ರಾಂಕ್ಸ್ (ಕಮೀಷನರ್ ದಾಳಿ ಶ್ರೇಣಿಗಳು) d) ಕ್ಯಾನೈನ್ ಅಸಾಲ್ಟ್ ರಿಸರ್ವ್ (ನಾಯಿಗೆ ಸಂಬಂಧಿಸಿದ ದಾಳಿ ರಿಸರ್ವ್/ಮೀಸಲು) 80 / 100 80) ಕ್ಯಾಪಿಡ್ ಆಕ್ಷನ್ ಫೋರ್ಸ್ (ಶೀಘ್ರ ಕಾರ್ಯಾಚರಣೆ ಸೇನಾಪಡೆ / ಸಂಘಟನೆ)....................ಸ್ಥಾಪಿಸಲಾದ ವಿಶೇಷ ಭಾಗವಾಗಿದೆ. a) ಸೈಬರ ಅಪರಾಧ ಪ್ರಕರಣಗಳನ್ನು ನಿಭಾಯಿಸಲು b) ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ಗಳನ್ನು ನಡೆಸುವುದಕ್ಕೆ c) ವಿಐಪಿ/ವಿವಿಐಪಿ ಗಳನ್ನು ರಕ್ಷಿಸಲು d) ದಂಗೆ, ಗಲಭೆಗಳನ್ನು ನಿಭಾಯಿಸಲು 81 / 100 81) ಶಾಸನಾಂಗ ಸಂಸ್ಥೆಯಲ್ಲಿ ಪರಿಗಣನೆಗೆ ಒಳಗೆ ಪ್ರಸ್ತಾವಿತ ಕಾನೂನನ್ನು................ಎಂದು ಕರೆಯಲಾಗುತ್ತದೆ. a) ಬಿಲ್/ಕರಡು ಮಸೂದೆ b) ಕಾಯಿದೆ c) ಸುಗ್ರೀವಾಜ್ಞೆ d) ಸೂಚನೆ 82 / 100 82) ಮನ್ನಿ, ಕರಾವಳಿ ಕರ್ನಾಟಕದ ಜನಪ್ರಿಯ ಆಹಾರ ತಯಾರಿಕೆಯು..................... ನ ಒಂದು ವಿಧವಾಗಿದೆ a) ರೊಟ್ಟಿ b) ರಸಮ್ c) ಸಿಹಿ ತಿಂಡಿ d) ದೋಸೆ 83 / 100 83) ರಾಜು ಅವನ ಕಚೇರಿಯಿಂದ 5 ಕಿ.ಮೀ. ಉತ್ತರಕ್ಕೆ ನಡೆಯುತ್ತಾನೆ. ನಂತರ ಪೂರ್ವಕ್ಕೆ ತಿರುಗಿ 6 ಕಿ.ಮೀ. ನಡೆಯುತ್ತಾನೆ. ನಂತರ, ಉತ್ತರಕ್ಕೆ ತಿರುಗಿ 4 ಕಿ.ಮೀ. ನಡೆಯುತ್ತಾನೆ. ಅಂತಿಮವಾಗಿ, ಪಶ್ಚಿಮಕ್ಕೆ ತಿರುಗಿ 6 ಕಿ.ಮೀ. ನಡೆಯುತ್ತಾನೆ. ಈಗ, ರಾಜು ಅವನ ಕಚೇರಿಯಿಂದ ಎಷ್ಟು ದೂರದಲ್ಲಿದ್ದಾನೆ ? a) 9.4Km b) 4. 4Km c) 5 Km d) 14Km 84 / 100 84) ಇಬ್ಬರು ಸಹೋದರಿಯರ ವಯಸ್ಸಿನ ವ್ಯತ್ಯಾಸ 3 ವರ್ಷಗಳು ಇದ್ದು, ಹಿರಿಯವಳಿಗೆ 15 ವರ್ಷಗಳು ಇದ್ದರೆ, ಕಿರಿಯವಳ ವಯಸ್ಸು ಏನು ? a) 18 ವರ್ಷಗಳು b) 10 ವರ್ಷಗಳು c) 15 ವರ್ಷಗಳು d) 12 ವರ್ಷಗಳು 85 / 100 85) ಒಬ್ಬ ಸೈಕಲ್ ಸವಾರ ಗಂಟೆಗೆ 20ಕಿ.ಮೀ. ವೇಗದಲ್ಲಿ, 40 ಕಿ.ಮೀ. ಪ್ರಯಾಣಿಸುತ್ತಾನೆ. ನಂತರ ಗಂಟೆಗೆ 10 ಕಿ.ಮೀ. ವೇಗದಲ್ಲಿ 40 ಕಿ.ಮೀ. ಪ್ರಯಾಣಿಸುತ್ತಾನೆ. ಈ ಸಮಗ್ರ ಪ್ರಯಾಣದ ಸರಾಸರಿ ವೇಗವೇನು ? a) ಗಂಟೆಗೆ 2.66 ಕಿ ಮೀ b) ಗಂಟೆಗೆ 15 ಕಿ. ಮೀ c) ಗಂಟೆಗೆ 13.33 ಕಿ. ಮೀ d) ಗಂಟೆಗೆ 16.66ಕಿ. ಮೀ 86 / 100 86) ಕೆಳಗಿನವುಗಳಲ್ಲಿ ಯಾವುದು ಇಂಟರ್ನೆಟ್ ಬ್ರೌಸರ್ ? a) ಮೊಜಿಲ್ಲಾ ಫೈರ್ಫಾಕ್ಸ್ b) ಮೈಕ್ರೋಸಾಫ್ಟ್ ಎಡ್ಜ್ c) ಕ್ರೋಮ್ d) ಗೂಗಲ್ 87 / 100 87) ಒಬ್ಬ ಸಹೋದ್ಯೋಗಿಯು ಅವನ/ಅವಳ ಕೆಲಸದ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವ ವೈಯುಕ್ತಿಕ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆ ಎಂದು ನಿಮಗೆ ತಿಳಿದಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಅತ್ಯಂತ ನೈತಿಕ ಮಾರ್ಗ ಯಾವುದು ? a) ಸಹೋದ್ಯೋಗಿಯನ್ನು ಮೀರಿಸಲು ಈ ಪರಿಸ್ಥಿತಿಯನ್ನು ನಿಮ್ಮ ಅನುಕೂಲಕ್ಕೆ ಬಳಸಿಕೊಳ್ಳುವುದು. b) ಬೆಂಬಲವನ್ನು ನೀಡಿ ಮತ್ತು ವೃತ್ತಿಪರ ಸಹಾಯವನ್ನು ಪಡೆಯಲು ಸಹೋದ್ಯೋಗಿ ಯನ್ನು ಪ್ರೋತ್ಸಾಹಿಸುವುದು c) ಸಮಸ್ಯೆಯನ್ನು ನಿರ್ಲಕ್ಷಿಸಿ ಮತ್ತು ಸಹೋದ್ಯೋಗಿ ತನ್ನ ಸ್ವಂತವಾಗಿ ವ್ಯವಹರಿಸಲು ಅವಕಾಶ ಮಾಡಿ ಕೊಡುವುದು. d) ಇತರೆ ಸಹೋದ್ಯೋಗಿಗಳೊಂದಿಗೆ ಸಹೋದ್ಯೋಗಿಯ ವಯಕ್ತಿಕ ಸಮಸ್ಯೆಗಳ ಬಗ್ಗೆ ಗೊಡ್ಡು ಹರಟೆ ಮಾಡುವುದು 88 / 100 88) ಒಬ್ಬ ಸಹೋದ್ಯೋಗಿಯು ಸಂಸ್ಥೆಗೆ ಹಾನಿಯುಂಟು ಮಾಡುವ ಅನೈತಿಕ ನಡವಳಿಕೆಯಲ್ಲಿ ತೊಡಗಿರುವುದನ್ನು ನೀವು ಕಂಡುಕೊಳ್ಳುತ್ತೀರಿ. ನೀವು ಏನು ಮಾಡಬೇಕು ? a) ಸಹೋದ್ಯೋಗಿಯೊಂದಿಗೆ ಮಾತನಾಡುವುದನ್ನು ತಪ್ಪಿಸಿ ಮತ್ತು ಅವನ ವ್ಯವಹಾರದಿಂದ ದೂರವಿರುವುದು b) ಕೆಲಸದ ಸ್ಥಳದಲ್ಲಿ ಉದ್ವಿಗ್ನತೆಯ ಉಂಟು ಮಾಡುವುದನ್ನು ತಪ್ಪಿಸಲು ಮೌನವಾಗಿರುವುದು c) ಸಂಸ್ಥೆಯೊಳಗಿನ ಉನ್ನತ ಅಧಿಕಾರಕ್ಕೆ ವರ್ತನೆಯನ್ನು ವರದಿ ಮಾಡುವುದು. d) ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಅನೈತಿಕ ನಡವಳಿಕೆಯಲ್ಲಿ ಸಹೋದ್ಯೋಗಿ-ಯನ್ನು ಸೇರಿಕೊಳ್ಳುವುದು. 89 / 100 89) ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ, 2023 ರಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ ಭಾರತೀಯ ಕ್ರೀಡಾಪಟು ಯಾರು ? a) ಪಿ.ವಿ. ಸಿಂಧು b) ನೀರಜ್ ಚೋಪ್ರ c) ಪಾರುಲ್ ಚೌಧರಿ d) ಹೀಮಾ ದಾಸ್ 90 / 100 90) 2023ರಲ್ಲಿ, ಭಾರತವು ಈ ಕೆಳಗಿನ ಯಾವುದರ ಅಧ್ಯಕ್ಷ ಸ್ಥಾನವನ್ನು ಹೊಂದಿತ್ತು? a) ಬಿಆರ್ಐಸಿಎಸ್ (ಬ್ರಿಕ್ಸ್) ಶೃಂಗಸಭೆ b) ಜಿ 20 ಶೃಂಗಸಭೆ c) ಹವಾಮಾನ ಸಂಭಾಷಣೆ d) ಯುಎನ್ ಜನರಲ್ ಅಸೆಂಬ್ಲಿ 91 / 100 91) ........................... ಒಳಗೊಂಡಿರುವ ಚುನಾವಣಾ ಸಂಬಂಧದ ಸಭೆಯಿಂದ (ಕಾಲೇಜಿನಿಂದ) ಭಾರತದ ರಾಷ್ಟ್ರಪತಿಯ ಆಯ್ಕೆ ಮಾಡಲಾಗುತ್ತದೆ. a) ಲೋಕಸಭೆ, ರಾಜ್ಯಸಭೆ ಮತ್ತು ರಾಜ್ಯದ ರಾಜ್ಯಪಾಲರು b) ರಾಜ್ಯಸಭೆಯ ಮತ್ತು ರಾಜ್ಯ ಶಾಸನಾಂಗ ಸಭೆಯ ಚುನಾಯಿತ ಸದಸ್ಯರು c) ಲೋಕಸಭೆಯ, ರಾಜ್ಯ ಸಭೆಯ ಮತ್ತು ರಾಜ್ಯ ಶಾಸನಾಂಗ ಸಭೆಯ ಚುನಾಯಿತ ಸದಸ್ಯರು d) ಲೋಕಸಭೆ ಮತ್ತು ರಾಜ್ಯ ಸಭೆಯ ಚುನಾಯಿತ ಸದಸ್ಯರು 92 / 100 92) ..........................ಮೂಲಕ ಬಡತನವನ್ನು ನಿರ್ಮೂಲ ಮಾಡಬಹುದು a) ಉದ್ಯೋಗ ಸೃಷ್ಟಿ b) ಕೌಶಲ್ಯ ಅಭಿವೃದ್ಧಿ c) ಉತ್ತಮ ಶಿಕ್ಷಣ d) ಇವುಗಳಲ್ಲಿ ಎಲ್ಲವೂ 93 / 100 93) ತಣ್ಣನೆಯ ರಾತ್ರಿಯಲ್ಲಿ ಹೊರಗೆ ಉಳಿದಿರುವ ಲೋಹದ ವಸ್ತುವು ಅದೇ ಪರಿಸ್ಥಿತಿಗಳಲ್ಲಿ ಮರದ ವಸ್ತುವಿಗಿಂತ ಹೆಚ್ಚು ತಂಪಾಗಿರುತ್ತದೆ ಎಂದು ನೀವು ಗಮನಿಸುತ್ತೀರಿ. ಈ ವಿದ್ಯಮಾನವನ್ನು ಯಾವ ವೈಜ್ಞಾನಿಕ ಪರಿಕಲ್ಪನೆಯು ವಿವರಿಸುತ್ತದೆ ? a) ನಿರೋಧನ b) ವಿಸ್ತರಣೆ c) ವಿಕಿರಣ d) ಸಂವಹನ 94 / 100 94) ದಪ್ಪವಾದ ಮೇಣದ ಲೇಪನದೊಂದಿಗೆ ಎಲೆಗಳನ್ನು ಹೊಂದಿರುವ ಸಸ್ಯವನ್ನು ನೀವು ಗಮನಿಸುತ್ತಿದ್ದೀರಿ. ಈ ರೂಪಾಂತರದ ಸಂಭಾವ್ಯ ಕಾರ್ಯವೇನು ? a) ಪರಾಗಸ್ಪರ್ಶಕಗಳನ್ನು ಆಕರ್ಶಿಸಲು b) ಬಾಷ್ಪ ವಿಸರ್ಜನೆ(ಟ್ರಾನ್ಸ್ಪಿರೇಷನ್) ಮೂಲಕ, ನೀರಿನ ನಷ್ಟವನ್ನು ತಡೆಗಟ್ಟಲು c) ಸಸ್ಯಾಹಾರಿಗಳನ್ನು ತಡೆಯಲು d) ಹೆಚ್ಚು ಬೆಳಕನ್ನು ಹೀರಿಕೊಳ್ಳಲು 95 / 100 95) ರೇಷ್ಮೆಹುಳು ಪ್ರಧಾನವಾಗಿ ಯಾವ ಸಸ್ಯದ ಎಲೆಗಳನ್ನು ತಿನ್ನುತ್ತದೆ ? a) ಬಿದಿರು b) ಚಹಾ c) ಹತ್ತಿ d) ಮಲ್ಬರಿ/ಹಿಪ್ಪನೇರಳೆ 96 / 100 96) ನಿಮ್ಮ ರೆಫ್ರಿಜರೇಟರ್ (ಶೀತಲ ಯಂತ್ರ ಪೆಟ್ಟಿಗೆ) ಯಲ್ಲಿರುವ ಹಾಲು ಹುಳಿಯಾಗಿರುವುದನ್ನು ನೀವು ಗಮನಿಸಬಹುದು. ಈ ಬದಲಾವಣೆಗೆ ಹೆಚ್ಚಾಗಿ ಕಾರಣವೇನು ? a) ಬ್ಯಾಕ್ಟಿರಿಯಾದ (ಅಣುಜೀವಿಗಳ) ಉಪಸ್ಥಿತಿ b) ಕಡಿಮೆ ತಾಪಮಾನ c) ಹೆಚ್ಚಿದ ಆದ್ರ್ರತೆ d) ಬೆಳಕಿಗೆ ಒಡ್ಡಿಕೊಳ್ಳುವುದು 97 / 100 97) ಸಂಚರಣೆಗಾಗಿ ಯಾವ ಪ್ರಾಣಿಯು ಹೆಚ್ಚಿನ ಆವರ್ತನದ ಧ್ವನಿ ತರಂಗಗಳನ್ನು ಹೊರಸೂಸುತ್ತದೆ ? a) ಆನೆ b) ಬಾವಲಿ c) ಇಲಿ d) ಕಾಂಗರೂ 98 / 100 98) ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಯಾವ ವಿಟಮಿನ್ ಉತ್ಪತ್ತಿಯಾಗುತ್ತದೆ ? a) ವಿಟಮಿನ್ ಎ b) ವಿಟಮಿನ್ ಬಿ 12 c) ವಿಟಮಿನ್ ಸಿ d) ವಿಟಮಿನ್ ಡಿ 99 / 100 99) ಮಾನವ ದೇಹದ ಮೂಗಿನ ಕೂದಲಿನ ಕಾರ್ಯ a) ಉಸಿರಾಟದ ವೇಗವನ್ನು ನಿಯಂತ್ರಿಸುತ್ತದೆ. b) ದೊಡ್ಡಕಣಗಳನ್ನು ಶೋಧಿಸುತ್ತದೆ. c) ಮೂಗಿನ ಕುಳಿಯನ್ನು ಬಾಯಿಯ ಕುಹರದಿಂದ ಪ್ರತ್ಯೇಕಿಸುತ್ತದೆ. d) ಇವುಗಳಲ್ಲಿ ಎಲ್ಲವೂ 100 / 100 100) ........................ಕಾರಣದಿಂದ ಹೆಚ್ಚಿನ ಎತ್ತರ ಪ್ರದೇಶದಲ್ಲಿ ಕಡಿಮೆ ತಾಪಮಾನದಲ್ಲಿ ನೀರು ಕುದಿಯುತ್ತದೆ. a) ಹೆಚ್ಚಿದ ಸೂರ್ಯನ ಬೆಳಕು b) ಒಜೋನ್ ಪದರದ ಸಾಮೀಪ್ಯ c) ಕಡಿಮೆಯಾದ ತಾಪಮಾನ d) ಕಡಿಮೆಯಾದ ವಾತಾವರಣದ ಒತ್ತಡ Your score isThe average score is 46% 0% Restart quiz