Join Whatsapp Group

Join Telegram Group

SSLC Result 2024 : SSLC ಫಲಿತಾಂಶ ಬಿಡುಗಡೆಗೆ ಮುಹೂರ್ತ ಫಿಕ್ಸ್ – ದಿನಾಂಕ??

ಕರ್ನಾಟಕದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದ ಸಮಯ ಈಗ ಬಂದೇ ಬಿಟ್ಟಿದೆ. 2023 & 24ನೇ ಸಾಲಿನಲ್ಲಿ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ರಿಸಲ್ಟ್ ನೋಡಲು ಕಾಯುತ್ತಿದ್ದಾರೆ. ಹೀಗೆ ಫಲಿತಾಂಶ ಯಾವಾಗ ಬರುತ್ತೆ? ಅಂತಾ ಕಾಯುತ್ತಿದ್ದ, ಎಸ್‌ಎಸ್‌ಎಲ್‌ನಿಂದ ಭರ್ಜರಿ ಸುದ್ದಿ ಇಲ್ಲಿದೆ. ಎಸ್‌ಎಸ್‌ಎಲ್‌ಸಿ ರಿಸಲ್ಟ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.

ಶೈಕ್ಷಣಿಕ ಗುಣಮಟ್ಟದ ವಿಚಾರದಲ್ಲಿ ಕರ್ನಾಟಕ ದೇಶದ ದೊಡ್ಡ ಹೆಸರು ಪಡೆದಿದೆ. ಹೀಗಾಗಿ ಕರ್ನಾಟಕದ ಎಸ್‌ಎಸ್‌ಎಲ್ ಫಲಿತಾಂಶವು, ಇಡೀ ದೇಶದ ಗಮನವನ್ನು ಸೆಳೆದಿದೆ. ಯಾಕಂದ್ರೆ ಕರ್ನಾಟಕದಲ್ಲಿ ಅದ್ರಲ್ಲೂ ನಮ್ಮ ಬೆಂಗಳೂರಿನಲ್ಲಿ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇದೀಗ 2023 ಮತ್ತು 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಲಿದೆ. ಹಾಗಾದ್ರೆ ಯಾವ ವೆಬ್‌ಸೈಟ್ ಮೂಲಕ ನೀವು ಫಲಿತಾಂಶವನ್ನು ಪರಿಶೀಲಿಸಬಹುದು? ರಿಸಲ್ಟ್ ಚೆಕ್ ಮಾಡಲು ಯಾವ ದಿನಾಂಕದವರೆಗೆ ಕಾಯಬೇಕು? ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದ ದಿನಾಂಕ ಯಾವುದು? ಮುಂದೆ ಓದಿ.

ಪ್ರಮುಖ ಮಾಹಿತಿ : 12ನೇ ಪಾಸ್….. 2,500+ BMTC ಹುದ್ದೆಗಳ ನೇಮಕಾತಿ 2024

ಎಸ್‌ಎಸ್‌ಎಲ್‌ಸಿ ಫಲಿತಾಂಶದ ದಿನಾಂಕ!

2023 ಮತ್ತು 2024ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 2750 ಕೇಂದ್ರಗಳಲ್ಲಿ ಒಟ್ಟು 869,000 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 441,000 ಹುಡುಗರು ಮತ್ತು 428,000 ಹುಡುಗಿಯರು ಇದ್ದರು. ಖಾಸಗಿ ಮತ್ತು ಮರು ಪರೀಕ್ಷೆ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಮೇ 10 ರಂದು ಫಲಿತಾಂಶ ಹೊರಬೀಳಲಿದೆ.

ರಿಸಲ್ಟ್ ನೋಡುವ ವೆಬ್‌ಸೈಟ್ ವಿಳಾಸ

ಕರ್ನಾಟಕದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಫಲಿತಾಂಶ ನೋಡೋದಕ್ಕೆ, ಅವರ ರಿಜಿಸ್ಟರ್ ನಂಬರ್ / ರೋಲ್ ನಂಬರ್ ಹೊಂದಿರಬೇಕು. ವಿದ್ಯಾರ್ಥಿಗಳು, ಪರೀಕ್ಷಾ ಪ್ರವೇಶ ಪತ್ರದಲ್ಲಿ ನೀಡಿರುವ ರಿಜಿಸ್ಟರ್ ನಂಬರ್ (ನೋಂದಣಿ ಸಂಖ್ಯೆ) ಮೂಲಕ ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ನೋಡಬಹುದು. ಇದಕ್ಕೆ ನೀವು kseab.karnataka.gov.in ಗೆ ಭೇಟಿ ನೀಡಬಹುದು. ಈ ಮೂಲಕ ಬಹುತೇಕ ವಿದ್ಯಾರ್ಥಿಗಳ ಭವಿಷ್ಯ ಮೇ 10 ರಂದು ನಿರ್ಧಾರ ಆಗಲಿದೆ. ಹಾಗೆಯೇ ಫಲಿತಾಂಶವನ್ನು ವೀಕ್ಷಿಸಲು ಕೆಲವು ಕಡೆ ವಿಶೇಷ ವ್ಯವಸ್ಥೆ ಮಾಡುವ ನಿರೀಕ್ಷೆಯಿದೆ.

ಕರ್ನಾಟಕವೇ ಅತ್ಯುತ್ತಮ ರಾಜ್ಯ!

ಶೈಕ್ಷಣಿಕ ಗುಣಮಟ್ಟದ ವಿಚಾರದಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಿದೆ. ಅದ್ರಲ್ಲು ನಮ್ಮ ರಾಜ್ಯದಲ್ಲಿ ಅತ್ಯಂತ ಕಠಿಣ ನಿಯಮಗಳ ಮೂಲಕ ಪರೀಕ್ಷೆ. ಇದೇ ಕಾರಣಕ್ಕೆ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳು ಕರ್ನಾಟಕಕ್ಕೆ ಬಂದು ಶಿಕ್ಷಣವನ್ನು ಪಡೆಯುತ್ತಾರೆ. ಹೀಗಾಗಿ ಕರ್ನಾಟಕದ ಎಸ್‌ಎಸ್‌ಎಲ್‌ಸಿ ಫಲಿತಾಂಶ ದೇಶದ ಗಮನ ಸೆಳೆದಿದೆ, ಸುದ್ದಿ ಏನು. ಈ ಬಾರಿ ಕೂಡ ಅಷ್ಟೇ ಎಸ್‌ಎಸ್‌ಎಲ್‌ಸಿ ಅಂದ್ರೆ 10ನೇ ತರಗತಿ ಪರೀಕ್ಷೆ ಫಲಿತಾಂಶ ಏನಾಗುತ್ತೆ? ಅನ್ನೋದು ಸಖತ್ ಕುತೂಹಲ ಕೆರಳಿಸಿದೆ. ಹಾಗೇ ಈ ಬಾರಿ ಹುಡುಗಿಯರೇ ಮತ್ತೊಮ್ಮೆ ಟಾಪ್ ಬರ್ತಾರಾ? ಅಥವಾ ಹುಡುಗರು ಇತಿಹಾಸ ಬದಲಿಸುತ್ತಾರಾ? ಅಂತಾ ಕಾದು ನೋಡಬೇಕಿದೆ.

Leave a Comment